ಕನ್ನಡಕ್ಕೆ ಬಂದ ಸುಂದರ ‘ದೃಶ್ಯ’

ನಾನು ನೋಡಿದ ಸಿನಿಮಾ ಕಳೆದ ವಾರ ಹಲ್ಲಿನ ಚಿಕಿತ್ಸೆಗೆಂದು ನನ್ನ ಹೆಂಡತಿಯ ಜತೆಗೆಮಂಗ್ಳೂರಿಗೆ ಹೋಗಿದ್ದೆನು. ಒಂದು ಹಲ್ಲನ್ನು ವೈದ್ಯರು ಕಿತ್ತು ಹಾಕಿದ್ದರಿಂದ,
ತೀವ್ರವಾದ ನೋವಿನಿಂದ ಬಳಲುತ್ತಿದ್ದ ನನಗೆ ಸುಮ್ಮನೆ ರೂಮಿನಲ್ಲಿ ಕೂರುವಬದಲು ಏಕೆ ಸಿನೆಮಾ ಒಂದು ಬಾರದು ಎನಿಸಿ ಹತ್ತಿರದಲ್ಲೇ ಇದ್ದ ಜ್ಯೋತಿ ಚಿತ್ರಮಂದಿರ‘ದೃಶ್ಯ’ ಕನ್ನಡ ಸಿನೆಮಾ ನೋಡುವುದೆಂದು ತೀರ್ಮಾನಿಸಿದೆವು.

ಚಿತ್ರವನ್ನು ಒಂದು ಕೊಲೆಯ ಸುತ್ತ ಹೆಣೆಯಲಾಗಿದೆ. ನಾನು ವಿದ್ಯಾರ್ಥಿ ಜೀವನದಲ್ಲಿ ನೋಡಿದ ಅಪರಿಚಿತ,ಆಲೆಮನೆ ಮತ್ತು ಅನ್ವೇಷಣೆ ಚಿತ್ರಗಳು ನೆನಪಿಗೆ ಬಂದವು.“ತ್ರಿಲ್ಲರ್” ಎಂದು ಆಗಲೇ ಘೋಷಿತವಾಗಿರುವುದರಿಂದ, ಕತೆಯನ್ನು ಇಲ್ಲಿ ಹೇಳುವುದು ನೋಡುಗರಿಗೆ ಅನ್ಯಾಯ ಮಾಡಿದಂತಾಗುವುದು.
ಮೊದಲರ್ಧ ಗಂಟೆ ಚಿತ್ರದ ಮೆಲೊಡ್ರಾಮ ನನ್ನ ‘ನೋವ’ನ್ನು ನೆನೆಪಿಸುತಿತ್ತು. ನಂತರಚುರುಕಾಗುತ್ತದೆ. ಅನಿರೀಕ್ಷಿತ ತಿರುವುಗಳನ್ನು ಪಡೆಯತ್ತ ಸಾಗುವ, ನಾಯಕ ನಟನಊಹೆಯಂತೆ ನಡೆಯುತ್ತರುವ ಘಟನೆಗಳು ಮನಶಾಸ್ತ್ರಜ್ಞರ ‘ಕ್ರಿಯೇಟಿವ್ವಿಶುಲೈಜೇಶನ್’ ತಂತ್ರ ನೆನೆಪಿಸುವುದು.

“ವಿಷ್ಣುವರ್ಧನ್ ನಟಿಸಬೇಕಿದ್ದ ಚಿತ್ರದಲ್ಲಿ ನಾನು ಮಾಡಿದ್ದೇನೆ” ಎನ್ನುವ ರವಿಚಂದ್ರನ್ ವಿನಯ ನುಡಿ ಮತ್ತು ಸರಿಸಮನಾಗಿ ನಟನೆ ಪ್ರಶಂಸನೀಯ. ಪೋಲಿಸ್ಪೇದೆಯ ಪಾತ್ರದಾರಿಯಾಗಿ ಅಚ್ಯತ್ ಅಭಿನಯದಲ್ಲಿ ನಾಯಕ ಪಾತ್ರದಾರಿಸರಿಸಮನಾಗಿ ನಿಲ್ಲುವರು. ಶಿವಾಜಿ ಪ್ರಭು ಮತ್ತು Lಪಿಎಸ್ ಪಾತ್ರಿದಾರಿಣಿ ನಟಿಯನ್ನುಆಮದು ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಈ ಪಾತ್ರಗಳನ್ನು ಕನ್ನಡದಲ್ಲಿ ಚೆನ್ನಾಗಿಮಾಡುವವರಿದ್ದರು. ಸಾದು ಕೋಕಿಲ ಹಾಸ್ಯ ಸಹ್ಯ. ಕನ್ನಡದ ಶಿವರಾಂ ಇತರೆಕಲಾವಿದರು ಇಲ್ಲದಿದ್ದರೆ ಸಿನಿಮಾ ಜೀವ ತುಂಬಿ ಹರಿಯುವುದು ಅಸಾದ್ಯ.

‘ಇಳಯರಾಜ ಎನ್ತಿರಲ್ಲ ಏನಿದೆ ಒಂದು ಹಾಡು ಬಿಟ್ರೆ’ ಎಂದ ನನ್ನಾಕೆಯ ಮಾತ ಎಷ್ಟುಸತ್ಯ ಎನಿಸಿತು. ಮೂಲ ಮಲೆಯಾಳಂ ಆದ್ದರಿಂದ, ಕೊಡಗಿನ ಸುಂದರ ದೃಶ್ಯಗಳನ್ನುಯಥಾವತ್ತು ನಕಲು ಮಾಡಲು ಛಾಯಾಗ್ರಹಕರಿಗೆ ಕಷ್ಟವಾಗಿರಲಿಲ್ಲ. ಸಿನಿಮಾದಮೊದಲಿಗೆ ಪ್ರವೇಶ ಮಾಡುವ ಪೋಲಿಸ್ ಅಧಿಕಾರಿಯ ‘ಲಿಂಕ್’ ಎಲ್ಲಿ ಸೇರುವುದೆಂದುಸಿನಿಮಾ ಮುಗಿದ ಮೇಲೂ ತಿಳಿಯಲಿಲ್ಲ. ಆದರೂ ಸಂಕಲನ ಮೊದಲ ಕ್ಲಾಸ್ ಪಾಸ್.ಯಶಸ್ವಿ ಕನ್ನಡೀಕರಣದ ಹಿಂದಿರುವ ಚಿತ್ರ ಕತೆಗಾರರು ಮತ್ತು ಎರಡನೇ ಅರ್ಧದಲ್ಲಿಕುರ್ಚಿಯ ಕೊನೆಗೆ ಕೂರುವಂತೆ ಮಾಡುವ ನಿರ್ದೇಶಕರಾದ ಪಿ.ವಾಸುರವರ ‘ಕೈಚಳಕ’ಮೆಚ್ಚುವಂತಾದ್ದು. ಮನೆಯಾಕೆಯ ಜತೆಗೆ ಕೂತು ನೋಡುವಂತಿರುವುದು ಈ ಸಿನಿಮಾದವಿಶೇಷ.
ಕೇರಳದ ‘ದೃಶ್ಯಂ’ ಸದಭಿರುಚಿಯ ಅಡಿಗೆಯನ್ನು ಬಡಿಸಿದ ನಿರ್ಮಾಪಕರಿಗೆ ಧನ್ಯವಾದಗಳು.

-Vidyadhar C.A. Selection grade lecturer, Sanjay memorial polytechnic, Sagar-577401

10-7-2014

Exit mobile version