ದೇಶ-ವಿದೇಶ

ಸುಜನ ಸೌಹಾರ್ದ ಬ್ಯಾಂಕಿನ ಸಂತೆಬೆನ್ನೂರು ಶಾಖೆಯ ಉದ್ಘಾಟನೆ

ಸಂತೆಬೆನ್ನೂರು : ಗ್ರಾಮೀಣ ಭಾಗದಲ್ಲಿ ಜನರ ಸೇವೆಗೆ ಸಹಕಾರಿ ಬ್ಯಾಂಕ್ ಎಂಬುದು ಹೆಸರಿಗೆ ತಕ್ಕಂತೆ ಸಹಕಾರಿಯಾಗಿ ಅನುಕೂಲವಾಗಿದೆ, ಕೇವಲ ನಗರಗಳಲ್ಲಿ ಮಾತ್ರ ಸ್ಥಾಪಿಸಲಾಗುತ್ತಿದ್ದ ಇಂತಹ ಬ್ಯಾಂಕುಗಳು ಇತ್ತೀಚೆಗೆ ಗ್ರಾಮೀಣ ಭಾಗದಲ್ಲೂ ತನ್ನ ಶಾಖೆಗಳನ್ನು ಆರಂಭಿಸುತ್ತಿರುವುದು ನಿಜಕ್ಕೂ ಸಮಾಜ ಸೇವೆಯಾಗಿದೆ ಎಂದು ಯುವ ಶಾಸ್ತ್ರೀಯ ಸಂಗೀತಗಾರ ಹಾಗೂ ಸಂಗೀತ ನಿರ್ದೇಶಕ ಡಾ.ಚಿನ್ಮಯ ರಾವ್ ಹೇಳಿದರು.
ಇತ್ತೀಚೆಗಷ್ಟೇ ಸಂತೆಬೆನ್ನೂರಿನ ಕೋಟೆ ರಸ್ತೆಯಲ್ಲಿ ಸುಜನ ಸೌಹಾರ್ದ ಮಲ್ಟಿ ಪರ್ಪಸ್ ಕೋ-ಆಪ್‍ರೇಟಿವ್ ಬ್ಯಾಂಕಿನ ಉಪಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಂತೆಬೆನ್ನೂರಿನ ಪಿ.ಎಸ್.ಐ ಶಿವರುದ್ರಪ್ಪ ಮೇಟಿ ಅವರು ಮಾತನಾಡುತ್ತಾ ಸ್ಥಳೀಯರು ನೂತನವಾಗಿ ಉದ್ಘಾಟನೆಗೊಂಡ ಈ ಬ್ಯಾಂಕಿನ ಉಪಶಾಖೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಇಂತಹ ಬ್ಯಾಂಕುಗಳು ತಮ್ಮ ಬ್ಯಾಂಕಿನ ವಾರ್ಷಿಕ ವರದಿಗಳನ್ನು ಸ್ಥಳೀಯ ಪೋಲಿಸ್ ಠಾಣೆಗೆ ನೀಡುವ ಮೂಲಹ ಉತ್ತಮ ಸಂಬಂಧವನ್ನಿಟ್ಟುಕೊಳ್ಳಬೇಕು ಎಂದರು.

ಚನ್ನಗಿರಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಹಾಗೂ ಸ್ಥಳಿಯ ಮುಖಂಡರಾದ ಸಿದ್ಧಪ್ಪ.ಎಂ ಮಾತನಾಡುತ್ತಾ ಸಂತೆಬೆನ್ನೂರಿನ ಜನರಿಗೆ ಉಳಿತಾಯ ಮಾಡಲು ಸಹಕಾರಿ ಬ್ಯಾಂಕ್‍ನಿಂದ ಪ್ರತಿದಿನÀ ಪಿಗ್ಮಿ ವ್ಯವಸ್ಥೆ ಹಾಗೂ ಚಾಪಾ ಕಾಗದ ದೊರೆಯುವಂತೆ ಮಾಡುವ ಮೂಲಕ ಈ ಊರು ಮತ್ತಷ್ಟು ಬೆಳೆಯುವಂತೆ ಮಾಡಲು ಈ ನೂತನ ಶಾಖೆ ಅನುಕೂಲಕರವಾಗಿದೆ ಎಂದು ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು.

ಶಿವಮೊಗ್ಗದ ಸುಪ್ರಸಿದ್ಧ ಲೆಕ್ಕ ಪರಿಶೋಧಕರಾದ ನಾಗರಾಜ್ ಸಿಂಗ್ ಈ ಸಂಸ್ಥೆ ಕಳೆದ ಏಳು ವರ್ಷಗಳಿಂದ ಅದೆಷ್ಟು ವ್ಯವಸ್ಥಿತವಾಗಿ ಬೆಳೆಯುತ್ತಾ ಹೆಮ್ಮರವಾಗುತ್ತಿದೆ ಎಂಬುದನ್ನು ವಿವರಿಸುತ್ತಾ ಆಡಳಿತ ಮಂಡಳಿಯ ಸರ್ವಸದಸ್ಯರನ್ನೂ ಅಭಿನಂದಿಸಿದರು.

ಬ್ಯಾಂಕಿನ ಅಧ್ಯಕ್ಷರಾದ ಸಿ.ಕೆ ಹರಹಳ್ಳಿ ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ್ದರು. ಕೊಟಕ್ ಮಹೇಂದ್ರ ಲೈಪ್ ಇನ್ಸುರೆನ್ಸಿನ ಶಿವಮೊಗ್ಗ ವಿಭಾಗದ ಮುಖ್ಯಸ್ಥರಾದ ಭೀಮಾ ನಾಯಕ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಬ್ಯಾಂಕಿನ ಮುಖ್ಯನಿರ್ವಹಣಾಧಿಕಾರಿ ವಿನಾಯಕ ಜಿ.ಎನ್ ನೆರೆದಿದ್ದ ಗ್ರಾಮಸ್ಥರಿಗೆ ಹಾಗೂ ಸಭಿಕರಿಗೆ ಈ ಬ್ಯಾಂಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಹಾಲೇಶ್ ಶ್ರೀವರ ಕಾರ್ಯಕ್ರಮವನ್ನು ನಿರೂಪಿಸಿದರು. ಉದ್ಘಾಟಕರನ್ನೂ ಹಾಗೂ ಮುಖ್ಯ ಅತಿಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Inauguration Event of SUJANA SOUHARDHA MULTI PURPOSE COOPERATIVE BANK LIMITED, Santebennuru Branch Office on last Sunday (February 21st 2021).

To know more about this Sujana Souharda multipurpose co operative ltd , you can visit following Links

http://sujanasouharda.com/about.html

https://g.co/kgs/Brm7S8

https://www.justdial.com/Shimoga/Sujana-Souharda-Multipurpose-Co-Operative-Ltd-Opp-Pruthvi-Mansion-Vinoba-Nagar-Shimoga/9999P8182-8182-140728172041-L7Q5_BZDET

 

1. ಸುಜನ ಸೌಹಾರ್ದ ಮಲ್ಟಿಪರ್ಪಸ್ ಕೋ ಅಪರೇಟಿವ್ ಲಿ. ರಾಜ್ಯಮಟ್ಟದ ಸಹಕಾರಿಯಾಗಿದ್ದುರಾಜ್ಯ ಸರ್ಕರದ ಸಹಕಾರ ಇಲಾಖೆ ಕಾಯ್ದೆ1997ರ ಅಧಿನಿಯಮದಅನ್ವಯ ನೋಂದಣಿಯಾಗಿರುವ ಸೊಸೈಟಿಯಾಗಿರುತ್ತದೆ.
ನೋ.ಸಂಖ್ಯೆ: ಆರ್.ಎಸ್.ಸರ್/ಸೌ.ಕಾ/ನೊ/15/2324/2013-14

2.ಆರು ವರ್ಷಗಳಿಂದ ಸುಜನ ಸೌಹಾರ್ದ ಸಹಕಾರಿಯುಉತ್ತಮ ಆಡಳಿತದೊಂದಿಗೆ ಹಾಗೂ ನಿರ್ವಹಣೆಯೊಂದಿಗೆ ಸತತವಾಗಿ ಲಾಭಗಳಿಸುತ್ತಾ ಷೇರುದಾರರ ಮತ್ತುಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ.

3.ಸದಸ್ಯರ ಹಾಗೂ ಗ್ರಾಹಕರ ಠೇವಣಿಗಳ ಹಿತರಕ್ಷಣೆ ಮಾಡುವುದು ಮತ್ತುಉತ್ತಮ ಸೇವಾ ಸೌಲಭ್ಯಕಲ್ಪಿಸುವುದು ಸುಜನ ಸೌಹಾರ್ದ ಸಹಕಾರಿಯಧ್ಯೇಯ ಮತ್ತುಉದ್ದೇಶವಾಗಿದೆ.

4.ಸುಜನ ಸೌಹಾರ್ದ ಸಹಕಾರ ಇಲಾಖೆ ಅನುಮೋದಿಸಿ ನೀಡಿರುವ ಬೈಲಾ ಪ್ರಕಾರ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದೆ.

5.ಸುಜನ ಸೌಹಾರ್ದ ಸಹಕಾರಒಂದುಉತ್ತಮ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದುಇಲ್ಲಿ ಸದ್ಯಸ್ಯರು ಪಿಗ್ಮಿಖಾತೆ, ಉಳಿತಾಯ ಖಾತೆ, ಆರ್ ಡಿ ಹಾಗು ಏಫ್.ಡಿ ಖಾತೆಯನ್ನುತೆರೆಯಬಹುದು.

ಸದಸ್ಯತ್ವ: 1476
ಷೇರು ಬಂಡವಾಳ :2698000
ಸಾಲ ವಿತರಣೆ: 45444288
ಠೇವಣಿಗಳು: 42051720

ದೂರವಾಣಿ ಸಂಖ್ಯೆ: 08182-255704 08180-295139

ಮುಖ್ಯಕಾರ್ಯನಿರ್ವಹಣಾಧಿಕಾರಿ : ವಿನಾಯಕ್ ಜಿ.ಎನ್

 

 

Photo Gallery of the Inauguration Event of SUJANA SOUHARDHA MULTI PURPOSE COOPERATIVE BANK LIMITED Santebennuru Branch Office on February 21st 2021

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker