ಪುಣ್ಯಕ್ಷೇತ್ರ

ಈ ಎರಡು ದಿನಗಳಲ್ಲಿ ಪ್ರತಿ ದಿನ ತಮ್ಮ ತಮ್ಮ ಮನೆಗಳಲ್ಲಿಯೇ ಶ್ರೀ ಶಿವ ಪಂಚಾಕ್ಷರಿ ಜಪದ ಕಾರ್ಯಕ್ರಮ ರೂಪಿಸಲಾಗಿದೆ

Hosagunda Temple 20th Varshikotsava

ಪ್ರಿಯಭಕ್ತ ಮಹಾಶಯರೇ,

ಕೇಂದ್ರ ಹಾಗೂ ರಾಜ್ಯ ಸರಕಾರದ ಸೂಚನೆಯಂತೆ ದಿನಾಂಕ: 08-05-2021 ರಿಂದ 09-05-21ರ ತನಕ ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದ ಸಮುಚ್ಚಯದಲ್ಲಿ ನಡೆಯಬೇಕಿದ್ದ ಇಪ್ಪತ್ತನೆಯ ವಾರ್ಷಿಕೋತ್ಸವ ರದ್ದು ಪಡಿಸಲಾಗಿದೆ. ಆದರೂ ತಮ್ಮೆಲ್ಲರಿಗೂ ಹೊಸಗುಂದದಲ್ಲಿ ಪೂಜಿಸಲ್ಪಡುವ ಶ್ರೀ ಉಮಾಮಹೇಶ್ವರಾದಿಯಾಗಿ ಎಲ್ಲಾ ಸಾನಿದ್ಯಗಳ ಪೂರ್ಣಾನುಗ್ರಹ ಸಿಗಲು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಆಢಳಿತ ಮಂಡಳಿ ವತಿಯಿಂದ ವಿಶೇಷವಾಗಿ ಈ ಎರಡು ದಿನಗಳಲ್ಲಿ ಪ್ರತಿ ದಿನ ತಮ್ಮ ತಮ್ಮ ಮನೆಗಳಲ್ಲಿಯೇ ಶ್ರೀ ಶಿವ ಪಂಚಾಕ್ಷರಿ ಜಪದ ಕಾರ್ಯಕ್ರಮ ರೂಪಿಸಲಾಗಿದೆ.

ತಾವುಗಳು ಈ ಎರಡು ದಿನವೂ ಸ್ನಾನ ಮಾಡಿ ಬೆಳಗ್ಗಿನಿಂದ ಮದ್ಯಾಹ್ನ 11 ಗಂಟೆಯ ತನಕ ತಮ್ಮಿಂದ ಸಾದ್ಯವಾದಷ್ಟು ‘ ಓಂ ನಮಃ ಶಿವಾಯ’ ಎಂದು ಜಪ ಮಾಡಿ ಈ ಕೆಳಗಿನ ಮೊಬೈಲ್ ನಂಬರ್‍ಗಳಿಗೆ ವಾಟ್ಸಪ್ ಅಥವಾ ಎಸ್.ಎಮ್.ಎಸ್ ಮೂಲಕ ತಮ್ಮ ಹೆಸರು ಹಾಗೂ ಆ ದಿನ ಮಾಡಿರುವ ಜಪದ ಸಂಖ್ಯೆ ತಿಳಿಸಿದಲ್ಲಿ ಆ ಸೇವೆಯನ್ನು ತಮ್ಮ ಪರವಾಗಿ ಶ್ರೀ ಉಮಾಮಹೇಶ್ವರ ಸನ್ನಿದಿಯಲ್ಲಿ ತಮ್ಮ ಹೆಸರು ಹಾಗೂ ತಾವು ಮಾಡಿರುವ ಜಪದ ಸಂಖ್ಯೆಯನ್ನು ಸೇರಿಸಿ ಸಂಕಲ್ಪಿಸಿ ಸಮರ್ಪಿಸಲಾಗುವುದು, ಹಾಗೂ ತನ್ಮೂಲಕ ಶ್ರೀ ಉಮಾಮಹೇಶ್ವರರಾದಿಯಾಗಿ ಎಲ್ಲಾ ಸಾನಿದ್ಯಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಸುಭ್ರಮಣ್ಯ ಭಟ್: 9980294062

ನಟರಾಜ್ ಹೆಭ್ಭಾರ್: 9900039443

ವಿನಾಯಕ್ ಭಟ್: 9901187299

ಲತಾ ಎನ್ ಕೆ: 9591260843

ಗಿರೀಶ್ ಗೌಡ್ರು: 9113853126

`
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್(ರಿ) ಪರವಾಗಿ
ಮ್ಯಾನೇಜಿಂಗ್ ಟ್ರಸ್ಟಿ

ಶ್ರೀ ಸಿ.ಎಮ್ ನಾರಾಯಣ ಶಾಸ್ತ್ರಿ

 

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker