ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ “ಕನ್ನಡ ಟೈಮ್ಸ್” ತ್ರೈಮಾಸಿಕ ಪತ್ರಿಕೆಯ ಲೋಕಾರ್ಪಣೆ

ಆನಂದಪುರ : ಇಲ್ಲಿಗೆ ಸಮೀಪದ ಹೊನಗೋಡಿನ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಮಾಜ ಸೇವಾ ಸಂಸ್ಥೆ ಹೊರತಂದಿರುವ “ಕನ್ನಡ ಟೈಮ್ಸ್” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಮಾಜಿ ಮುಖ್ಯಮಂತ್ರಿ ಹಾಗು ಸಂಸದ ಬಿ.ಎಸ್ ಯಡಿಯೂರಪ್ಪ ಮೇ ನಾಲ್ಕರಂದು ಭಾನುವಾರ ತಮ್ಮ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿನ್ಮಯ ಎಂ.ರಾವ್ ಸಾರಥ್ಯದಲ್ಲಿ ಹೊರಬಂದಿರುವ “ಕನ್ನಡ ಟೈಮ್ಸ್” ಎಂಬ ತ್ರೈಮಾಸಿಕ ಪತ್ರಿಕೆ ವಿಶ್ವಕನ್ನಡಿಗರಿಗೊಂದು ಹೆಮ್ಮೆಯ ಸಂಗತಿ. ಇಂತಹ ಒಂದು ವೈಚಾರಿಕ ತ್ರೈಮಾಸಿಕ ಪತ್ರಿಕೆಯ ಅಗತ್ಯ ಕನ್ನಡಿಗರಿಗಿತ್ತು. ಹೊನಗೋಡು ಎಂಬ ಹಳ್ಳಿಯಲ್ಲಿದ್ದು ಒಬ್ಬ ಉದಯೋನ್ಮುಖ ಸಂಗೀತ ನಿರ್ದೇಶಕರಾಗಿಯೂ ಬೆಳೆಯುತ್ತಿರುವ ಚಿನ್ಮಯ ಬಹಳ ಶ್ರಮಪಟ್ಟು ಇದನ್ನು ರೂಪಿಸಿದ್ದಾರೆ. ಕನ್ನಡಿಗರಿಗೆ ವಾಸ್ತವಿಕ ಸಂಗತಿಗಳನ್ನು ತಿಳಿಸುವ ಪ್ರಯತ್ನ ಈ ಪತ್ರಿಕೆಯಿಂದಾಗಲಿ. ಚಿನ್ಮಯ ಅವರಂತಹ ಯುವಕ ಈ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ. ಚಿನ್ಮಯ ತಮ್ಮ ಸಂಸ್ಥೆಯ ಮೂಲಕ ಇಂತಹ ಒಂದು ಅಪರೂಪದ ಸಾಹಸಕ್ಕೆ ಕೈಹಾಕಿ ಕನ್ನಡಿಗರಿಗೆ ಕೊಡುಗೆಯನ್ನು ಕೊಡುತ್ತಿದ್ದಾರೆ. ಅವರು ಹಾಗು ಅವರ ಕನ್ನಡ ಟೈಮ್ಸ್ ಎಂಬ ಸಮಾಜ ಸೇವಾ ಸಂಸ್ಥೆ ಯಶಸ್ವಿಯಾಗಲಿ. ಕನ್ನಡಿಗರು ಇದರ ಸದುಪಯೋಗವನ್ನು ಪಡೆಯುವಂತಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕನ್ನಡ ಟೈಮ್ಸ್ ಸಂಸ್ಥೆಯ ಸಂಸ್ಥಾಪಕ ಚಿನ್ಮಯ ಎಂ.ರಾವ್, ಉದ್ಯಮಿ ಎಲ್.ಸಿದ್ಧಮಾರಯ್ಯ, ಚಲನಚಿತ್ರ ನಿರ್ದೇಶಕರಾದ ಗುರುಪ್ರಸಾದ್ ಮದ್ಲೆಸರ, ಆನಂದ್ ಎಂ.ವಠಾರ್, ಡಾ.ಆನಂದ್, ಬಿ.ವಂಶಿ ಹಾಗು ರಾಘವೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

May 4th Sunday 2014

****************

Exit mobile version