ರಂಗಭೂಮಿ

ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಾಹಿತಿ ಸೋಮು ರೆಡ್ಡಿ ರಚನೆಯ ದ್ವಂದ್ವ ನಾಟಕ

ದಿನಾಂಕ 27-03-2021 ಶನಿವಾರದಂದು ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ವಿಧ್ಯಾವರ್ದಕ ಸಂಘದಲ್ಲಿ

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸ್ನೇಹಿತರು ಕಲಾ ಸಂಘ (ರಿ) ಧಾರವಾಡ ಇವರು ಅಭಿನಯಸಿರುವ ಸಾಹಿತಿ ಸೋಮು ರೆಡ್ಡಿ ರಚನೆಯ ದ್ವಂದ್ವ ನಾಟಕ ದಿನಾಂಕ 27-03-2021 ಶನಿವಾರದಂದು ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ವಿಧ್ಯಾವರ್ದಕ ಸಂಘದಲ್ಲಿ ಪ್ರದರ್ಶನವಾಗಲಿದೆ.

ಹಿರಿಯ ನಿರ್ದೇಶಕ ವಿಜಿಯೀಂದ್ರ ಅರ್ಚಕ ಅವರ ನಿದೇರ್ಶನದಲ್ಲಿ ಮೂಡಿಬರುವ ಈ ನಾಟಕಕ್ಕೆ ಖ್ಯಾತ ಸಂಗೀತ ನಿರ್ದೇಶಕ ಡಾ. ಶ್ರೀಧರ ಕುಲಕರ್ಣಿ ಸಂಗೀತ ಸಂಯೋಜಿಸಿದ್ದಾರೆ. ಕಿಟ್ಟಿ ಗಾಂವಕರ ಅವರು ಬೆಳಕು ನೀಡಲಿದ್ದು, ಸಂತೋಷ ಮಹಾಲೆ ಅವರ ಪ್ರಸಾದನ ಮಾಡಲಿದ್ದಾರೆ. ಮನುಷ್ಯನ ವಾಸ್ತವ ಬದುಕಿನ ಕೌಟುಂಬಿಕ ಮತ್ತು ಸಾಮಜಿಕ ತಲ್ಲಣಗಳನ್ನು, ಈ ಯಾಂತ್ರಿಕ ಯುಗದ ಜಲ್ವಂತ ಸಮಸ್ಯೆಗಳನ್ನು ಬಿತ್ತರಿಸುವ ಕಥಾವಸ್ತು ಹೊಂದಿರುವ ಈ ನಾಟಕದಲ್ಲಿ ಮುಖ್ಯಭೂಮಿಕೆಯಲ್ಲಿ ಹಿರಿಯ ಕಲಾವಿದರಾದ ಸಿ.ಎಸ್.ಪಾಟೀಲಕುಲಕರ್ಣಿ, ಪವನ ದೇಶಾಪಾಂಡೆ, ರಿತ್ವೀಕ್ ಹಿರೇಮಠ, ರತ್ನಾ ಅರ್ಚಕ್ ಮುಂತಾದವರು ಅಭಿನಯಿಸಲಿದ್ದಾರೆ.

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker