‘ಜೂನಿಯರ್’ ಗೆ ವೆಲ್ ಕಂ ಎಂದ ಅಭಿಮಾನಿಗಳು- ಕಿರೀಟಿ ವಾಯ್ಸ್ ಗೆ ಸಿನಿರಸಿಕರ ಮೆಚ್ಚುಗೆ

ಜನಾರ್ಧನ್ ರೆಡ್ಡಿ ಪುತ್ರ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚು ಹರಿಸಲು ರೆಡಿಯಾಗಿದ್ದಾರೆ. ಅದಕ್ಕೆ ಬೇಕಾದ ಸಕಲ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟ ಚಿತ್ರತಂಡ ಹೀರೋ ಇಂಟ್ರಡಕ್ಷನ್ ವೀಡಿಯೋ ಬಿಡುಗಡೆ ಮಾಡಿತ್ತೇ ಹೊರತು ಸಿನಿಮಾ ಟೈಟಲ್ ರಿವೀಲ್ ಮಾಡಿರಲಿಲ್ಲ. ಕಿರೀಟಿ ಮೊದಲ ಚಿತ್ರದ ಟೈಟಲ್ ಏನಿರಬಹುದು, ಟೈಟಲ್ ಮಾಸ್ ಆಗಿರುತ್ತಾ ಕ್ಲಾಸ್ ಆಗಿರುತ್ತಾ ಹೀಗೇ ಒಂದಷ್ಟು ಕುತೂಹಲ ಟೈಟಲ್ ಮೇಲೆ ಹುಟ್ಟಿಕೊಂಡಿತ್ತು. ಆ ಎಲ್ಲಾ ಕುತೂಹಲಕ್ಕೂ ಚಿತ್ರತಂಡ ನಿನ್ನೆ ತೆರೆ ಎಳೆದಿದೆ. ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ವೀಡಿಯೋ ಬಿಡುಗಡೆ ಮಾಡಿ ‘ಜೂನಿಯರ್’ ಎಂಬ ಟೈಟಲ್ ರಿವೀಲ್ ಮಾಡಿದೆ.

ಡಿಫ್ರೆಂಟ್ ಆಗಿ ಟೈಟಲ್ ಲಾಂಚ್ ಮಾಡಿರುವ ಚಿತ್ರತಂಡದ ಪ್ರಯತ್ನಕ್ಕೆ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ. ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಟೈಟಲ್ ವೀಡಿಯೋವನ್ನು ಇದುವರೆಗೂ ಎಂಟು ಲಕ್ಷಕ್ಕೂ ಹೆಚ್ಚು ಜನ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಬರೀ ಮೆಚ್ಚುಗೆ ಸೂಚಿಸಿಲ್ಲ, ಟೈಟಲ್ ವೀಡಿಯೋನಲ್ಲಿ ಕಿರೀಟಿ ವಾಯ್ಸ್ ಕೇಳಿ ಫಿದಾ ಆಗಿದ್ದಾರೆ. ಹೀರೋಗೆ ಬೇಕಾದ ವಾಯ್ಸ್ ಕಿರೀಟಿಯಲ್ಲಿದೆ, ಜೊತೆಗೆ ಅಷ್ಟೇ ಚೆನ್ನಾಗಿ ಡೈಲಾಗ್ ಡೆಲಿವರಿ ಮಾಡಿದ್ದಾರೆ ಎಂಬ ಪ್ರಶಂಸೆಯೂ ವ್ಯಕ್ತವಾಗ್ತಿದೆ. ವಿಶೇಷ ಅಂದ್ರೆ ಕಿರೀಟಿ ಕನ್ನಡ, ತೆಲುಗು ಮಾತ್ರವಲ್ಲದೇ ತಮಿಳಿನಲ್ಲೂ ಸ್ವತಃ ತಾವೇ ವಾಯ್ಸ್ ನೀಡಿರೋದು ಅಲ್ಲಿಯ ಚಿತ್ರರಸಿಕರ ಮನಸ್ಸಿಗೆ ಸಿಕ್ಕಾಪಟ್ಟೆ ಖುಷಿ ನೀಡಿದ್ದು, ಕಿರೀಟಿಗೆ ವೆಲ್ ಕಂ ಹೇಳುತ್ತಿದ್ದಾರೆ.
.
‘ಜೂನಿಯರ್’ ಆಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲೋಕೆ ಕಿರೀಟಿ ಹೊರಟಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ನಿರ್ಮಾಣವಾಗುತ್ತಿದ್ದು ಮೊದಲ ಸಿನಿಮಾದಲ್ಲೇ ನಾಲ್ಕು ಚಿತ್ರರಂಗಕ್ಕೆ ಹೀರೋ ಆಗಿ ಕಿರೀಟಿ ಎಂಟ್ರಿ ಕೊಡುತ್ತಿದ್ದಾರೆ. ‘ಜೂನಿಯರ್’ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಬಿಗ್ ಬಜೆಟ್ ನಲ್ಲಿ ಬಹಳ ಅದ್ದೂರಿಯಾಗಿ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

‘ಮಾಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ತಾಂತ್ರಿಕ ಬಳಗ ಕೂಡ ಅಷ್ಟೇ ಶ್ರೀಮಂತವಾಗಿದ್ದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ. ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ಸ್ ಸಾಹಸ ನಿರ್ದೇಶನ ಜೂನಿಯರ್ ಚಿತ್ರಕ್ಕಿದೆ.

Kannada

 

Exit mobile version