ಚಟ್ನೆ ಪುಡಿ : ಇದನ್ನು ಅನ್ನದ ಜೊತೆ ಸೇರಿಸಿ ಕೊಂಡು ತಿನ್ನಬಹುದು ಮತ್ತು ದೋಸೆ ಜೊತೆ ಸಹ ತಿನ್ನಬಹುದು

ಬೇಕಾಗುವ ಸಾಮಾಗ್ರಿಗಳು : ಕಡ್ಲೇ ಬೇಳೆ- ಒಂದು ಲೋಟ, ಬೇವಿನ ಸೊಪ್ಪು -ಒಂದು ಲೋಟ, ಮೆಣಸಿನ ಪುಡಿ ಒಂದು ಚಮಚ, ವಾಟೆ ಪುಡಿ ಒಂದು ಚಮಚ, ಉಪ್ಪು.

ಮಾಡುವ ವಿಧಾನ : ಕಡ್ಲೇ ಬೇಳೆಯನ್ನು ಒಂದು ಬಾಣಲಿಗೆ ಹಾಕಿ ಹುರಿದು ಕೊಳ್ಳಿ, ನಂತರ ಬೇವಿನ ಸೊಪ್ಪನ್ನು ಬಾಣಲಿಗೆ ಹಾಕಿ ಹುರಿದು ಕೊಳ್ಳಿ, ನಂತರ ಇವೆರಡನ್ನೂ ಮಿಕ್ಸರ್ ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ, ನಂತರ ವಾಟೆ ಪುಡಿ, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಪುಡಿ ಮಾಡಿದ ಮಿಶ್ರಣದೊಂದಿಗೆ ಸೇರಿಸಿ.ಇದನ್ನು ಅನ್ನದ ಜೊತೆ ಸೇರಿಸಿ ಕೊಂಡು ತಿನ್ನಬಹುದು ಮತ್ತು ದೋಸೆ ಜೊತೆ ಸಹ ತಿನ್ನಬಹುದು.

ಶೀಲಾ ಸಿ.ರಾವ್ ಹೊನಗೋಡು.
Wednesday, ‎October ‎26, ‎2011

Exit mobile version