ಉದ್ಯಾನವನ

ಹೊನಗೋಡಿನ ಹೂಬನ

honagodu-garden-of-mruthyunjaya-rao-anasuya-rao-18ಕೈತೋಟ ನಾನು ಹುಟ್ಟಿದ ಊರು. ಆಗಿನ ಕಾಲದಲ್ಲಿ ನಮ್ಮ ಊರಿನಲ್ಲಿ ಎಲ್ಲರ ಮನೆಯ ಮುಂದೆ “ಕೈತೋಟ”
ಇದ್ದಿದ್ದರಿಂದ, ಊರಿಗೆ “ಕೈತೋಟ” ಅನ್ವರ್ಥನಾಮವೇ ಆಗಿತ್ತು. ಆ ಊರಿನಲ್ಲಿಯೇ ಹುಟ್ಟಿ ಅದರ ಮಣ್ಣಿನಲ್ಲಿಯೇ ಬೆಳೆದ ನನಗೆ ಕೈತೋಟದ ಹುಚ್ಚು ಬಾಲ್ಯದಿಂದಲೂ ಅಂಟಿ ಬಂದಿದ್ದು, ಮದುವೆ ಆಗಿ ಈ ಊರಿಗೆ ಬಂದ ಮೇಲೆ ಈ ಮನೆಯ ಸುಂದರ ಪ್ರಕೃತಿ, ಪರಿಸರ ಇಂಥ ಸುಂದರ ಕೈತೋಟ ಮಾಡುವುದಕ್ಕೆ ಸಹಕಾರಿಯೇ ಆತೆಂದು ತಮ್ಮ ಅನುಭವವನ್ನು ಬಿಚ್ಚುತ್ತಾ ಹೋಗುವ, ಹೊನಗೋಡಿನ ಅನಸೂಯ ಎಂ.ರಾವ್ ಅವರ ಕೈತೊಟದ ಅನುಭವ  ಅನನ್ಯವಾದುದು.

honagodu-garden-of-mruthyunjaya-rao-anasuya-rao-2ಶಿವಮೊಗ್ಗ – ಸಾಗರ ಮಧ್ಯೆ ಹೊಸೂರು ಗ್ರಾಮ ಪಂಚಾತಿಗೆ ಸೇರಿದ ಹೊನಗೋಡು ಒಂದು ಪುಟ್ಟ ಹಳ್ಳಿ. ಇವರ ಕೈತೋಟಕ್ಕೆ ಕಾಲಿಟ್ಟಾಗ “ದೂರಬೆಟ್ಟದಲ್ಲಿ ಒಂದು ಪುಟ್ಟ ಮನೆ ಇರಬೇಕು. ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು” ಎಂದು ಹಾಡಿದ ಕ” ಬಹುಷಃ ಇಂತ ವಾತಾವರಣವನ್ನು ನೋಡಿಯೇ ಕವನ ರಚಿಸಿರಬಹುದೆಂಬ ಭಾವನೆ ಬರದೇ ಇರುವುದಿಲ್ಲ.

honagodu-garden-of-mruthyunjaya-rao-anasuya-rao-9ಎತ್ತ ಕಣ್ಣು ಹಾಸಿದರೂ ಪ್ರಕೃತಿ ಸೌಂದರ್ಯವೇ ತುಂಬಿ ತುಳುಕುತ್ತಿರುವ ಪರಿಸರದ ಮಧ್ಯೆ,ಮೃತ್ಯುಂಜಯ ರಾವ್,ಅನಸೂಯ ಎಂ.ರಾವ್ [೦೮೧೮೩-೨೯೬೧೬೮] ಅವರ “ಭಕ್ತಿಗಮ್ಯಾ” ಪ್ರವೇಶಿಸಿದಾಗ ಕೈತೋಟ ನಮ್ಮನ್ನು ಆರ್ಕಸುವುದರ ಜೊತೆಗೆ ಕಣ್ಣು ಮನಗಳಿಗೆ ಆನಂದ ನೀಡಿ ಆಹ್ವಾನಿಸುವ ಪರಿ ಎಂತವರಿಗೂ ಮುದ ಕೊಡುತ್ತದೆ.

ಸುಮಾರು ಹದಿನೈದು ವರ್ಷಗಳಿಂದಲೂ ಕೈತೋಟ ಬೆಳೆಸುತ್ತಾ ಬಂದಿರುವ ಮೃತ್ಯುಂಜಯ ರಾವ್ ದಂಪತಿಗಳು , ಬೇರೆಯವರು ತಮ್ಮ ಕೈತೋಟ ನೋಡಿ, ಮೆಚ್ಚಬೇಕು ಪ್ರಶಸ್ತಿ ಕೊಡಬೇಕೆಂಬ ಹಂಬಲದಿಂದ ಬೆಳಸಿದ್ದಲ್ಲ. ಈ ಕೈತೋಟ ಬೆಳೆಸುವಲ್ಲಿ ಅವರಿಗೆ ತೋಟಗಾರಿಕಾ ಇಲಾಖೆಯವರ ಮಾರ್ಗದರ್ಶನ ವಾಗಲೀ , ಮತ್ತಿತರ ಕೃ ಸಂಬಂಧ ಸಲಹೆಗಾರರ ಸಲಹೆ ಪಡೆದಿದ್ದಲ್ಲ.
ಜಗ ಮತ್ತು ನೀರಿನ ಕೊರತೆ ಇರಲಿಲ್ಲ. ಪ್ರಾರಂಭದಲ್ಲಿ ಪ್ರವೇಶ ದ್ವಾರಗಳೆರಡೂ ಕಡೆಯಲ್ಲಿ ಜೀವ ಬೇಲಿ ಗಿಡಗಳನ್ನು ಬೆಳೆಸಿ ಅದಕ್ಕೊಂದು ಅಂದದ ಆಕಾರ ಕೊಟ್ಟರು. ನಂತರ ಮಧ್ಯದ ಜಾಗಕ್ಕೆ “”ಧ ರೀತಿಯ ಹೂ”ನ ಗಿಡಗಳು ಮತ್ತು ಆಯಾ ಋತುಶ್ರಾಯದಲ್ಲಿ ಬಿಡುವ ಎಲ್ಲ ತರಹೇವಾರಿ ಗಿಡ ಬೆಳೆಸಿರುವುದರಿಂದ ಕೈತೋಟ ಬಣ್ಣ ಬಣ್ಣದ ಚಿತ್ತಾರದಿಂದ ಕಂಗೊಳಿಸುತ್ತದೆ.

honagodu-garden-of-mruthyunjaya-rao-anasuya-rao-1ಇದಕ್ಕೆ ಶೋಭೆ ತರುವಂತ ಪುಟ್ಟ ಕೊಳ ಇದೆ. ಕೊಳದಲ್ಲಿ ಕಮಲ ಅರಳಿದಾಗ ವಸಂತ ಕಾಲದ ಕೋಗಿಲೆ ಇಂಚರ, ಹಕ್ಕಿ ಪಕ್ಷಿಗಳ ಕಲರವ ಬೇಸಿಗೆಯಲ್ಲಿ ಸುಡು ಬಿಸಿಲನ್ನು ಮರೆಸುತ್ತದೆಯಂತೆ.

ಇಂತ ಸುಂದರ ಕೈತೋಟ ಬೆಳೆಸುವಾಗ ಜಾಗ ಚೊಕ್ಕಟ ಮಾಡಿ ಅದಕ್ಕೊಂದು ರೂಪುರೇಷೆ ಕೊಡುವಾಗ ಸ್ಪಲ್ಪ ಕಷ್ಟ ಪಟ್ಟಿದ್ದಿದೆ. ಕೆಲವು ಸಾರಿ ಜಾನುವಾರುಗಳು ಬೇಲಿ ಮುರಿದು ಚಿಗುರಿನ ಗಿಡ ಗಳನ್ನು ತಿಂದಾಗ ಬೇಸರ ಪಟ್ಟಿದ್ದು ಇದೆ. ಮತ್ತೆ ಹೊಸ ಗಿಡ ತಂದು ಹೂ ಅರಳಿದಾಗ ಆ ನೋವು ಮರೆತು ಹೋತು ಎಂದು ಗತಕಾಲವನ್ನು ಈ ದಂಪತಿಗಳು ಮೆಲಕು ಹಾಕಿದರು.

honagodu-garden-of-mruthyunjaya-rao-anasuya-rao-19ಮನಸ್ಸಿಗೆ ಬೇಸರವಾದಾಗ, ಮನೆ ಕೆಲಸ ಮುಗಿಸಿ ‘ಭಕ್ತಿಗಮ್ಯಾ” ರ ಬಿಸಲು ಮಚ್ಚಿನ ಮೇಲೆ ನಿಂತು, ತೋಟ ನೋಡಿದಾಗ ಒಂದಿಷ್ಟು ಹೊಸ, ಹೊಸ “ಧಾನ ಹೊಳೆಯುತ್ತದೆ. ತಕ್ಷಣ ಕಾರ್ಯ ರೂಪಕ್ಕೆ ತಂದು ಬಿಡುತ್ತೇವೆ ಎನ್ನುತ್ತಾರೆ.

ಇವರಿಗೆ ಕಸಿ ಕಟ್ಟುವ ಕಲೆ ಕರಗತವಾಗಿದೆ. ಒಂದೇ ಜಾತಿ ಗಿಡಕ್ಕೆ ಹಲವು ಬಣ್ಣದ ಗಿಡ ಸಂಯೋಜಿಸಿ ಹೊಸತನ ತಂದಿದ್ದಾರೆ.

ಇವರ ಮನೆಗೆ ಭೇಟಿ ಕೊಟ್ಟವರಿಗೆಲ್ಲಾ ಕೈತೋಟದ ಮೇಲೆ ಕಣ್ಣು.

ಬರಿದೇ ಹೂಗಿಡಗಳಿಗೆ ಇಲ್ಲಿ ಪ್ರಾಶಸ್ತ್ಯ”ರದೆ ಮನೆಯ ಸುತ್ತ ಮುತ್ತಲ ಜಾಗದಲ್ಲಿ, ತರಕಾರಿ ಮತ್ತು ಕೆಲವು ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. “ಂಭಾಗದ “ತ್ತಲು ಔಷಧಿ ಸಸ್ಯಕ್ಕೆ “ಸಲು. ಸುಮಾರು ಒಂದು ನೂರಕ್ಕೂ ಹೆಚ್ಚು ಔಷಧಿ ಸಸ್ಯಗಳು ಇವರ ಕೈತೋಟದಲ್ಲಿದೆ. ಕರಿಲಕ್ಕಿ, ಬಿಳಿ ಹಾಲುವಾಣ, ಸರ್ಪಗಂಧಿ, ಶತಾವರಿ ಮುಂತಾದ “ಶೇಷ ಔಷಧಿ ಸಸ್ಯಗಳನ್ನು ಬೆಳೆಸಿ ಅಳಿ”ನ ಅಂಚಿನಲ್ಲಿರುವ ಸಸ್ಯಗಳನ್ನು ಉಳಿಸುತ್ತಿದ್ದಾರೆ.

honagodu-garden-of-mruthyunjaya-rao-anasuya-rao-10ಕೈತೋಟದ ನಡುವೆ ಸುಶ್ರಾವ್ಯ ಸಂಗೀತವನ್ನು ಆಸ್ವಾಧಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಮನೆಯ ಹತ್ತಿರವೇ ಉತ್ತಮ ಸಾವಯವ ಗೊಬ್ಬರ ಮಾಡಿ ಕೈತೋಟಕ್ಕೆ ಬಳಸುತ್ತಾರೆ.

ಕೈತೋಟ ಬೆಳೆಸುವವರಿಗೆ ನಿಮ್ಮ ಸಲಹೆ ಏನು ಎಂದು ಅನಸೂಯ ಅವರನ್ನು ಪ್ರಶ್ನಿಸಿದಾಗ, ಕೈ ತೋಟ ಬೆಳೆಸುವುದು ಒಂದು ಕಲೆ. ನಾವು ಚಿಕ್ಕ ಮಕ್ಕಳನ್ನು ಆರೈಕೆ ಮಾಡಿ ಪೋಸಿದ ಹಾಗೆ ಸಸ್ಯ ಗಳನ್ನು ಪ್ರೀತಿಸಬೇಕು. ಇಂತ ಹವ್ಯಾಸ ಪ್ರತಿಯೊಬ್ಬ ಗೃ”ಣಿಯಲ್ಲೂ ಇರಬೇಕು. ಇದು ಮನಸ್ಸಿಗೆ ತುಂಬಾ ಮುದ ನೀಡುತ್ತದೆ ಮತ್ತು ಸಮಯದ ಸದುಪಯೋಗವಾಗುತ್ತದೆ.

honagodu-garden-of-mruthyunjaya-rao-anasuya-rao-15ಹೂ ಅರಳಿದಾಗ ಆನಂದ, ತಾಜಾ ತರಕಾರಿಯ ಸೇವನೆಯ ಸ್ವಾದತೆ, ಔಷಧಿ ಸಸ್ಯಗಳನ್ನು ಬೆಳೆಸುವ ಹುಮ್ಮಸ್ಸು ಎಲ್ಲ ಒಂದೆಡೆ ಸೇರಿದಾಗ ಕೈತೋಟದ ಮಹತ್ವದ ಬಗ್ಗೆ ಹೇಳುವಂತಿಲ್ಲ.

ಮನೆ ಮುಂದೆ, “ಂದೆ, ಎಲ್ಲೇ ಆಗಲಿ, “ಶಾಲ ಜಾಗ”ರಲಿ, ಅಂಗೈ ಅಗಲ ಜಾಗ”ರಲಿ ಇದ್ದು ದರಲ್ಲಿಯೇ ಕೈತೋಟ ಬೆಳೆಸಬೇಕು. ಇತ್ತೀಚೆಗಂತೂ ಟೆರೆಸ್ ಕೈತೋಟ ಜನಾಕರ್ಷಣೆ ಆಗಿದೆ.

honagodu-garden-of-mruthyunjaya-rao-anasuya-rao-13ಹೊನಗೋಡಿನ ಹೂಬನದಲ್ಲಿ ಅಡ್ಡಾಡಿ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಹೊರ ಹೊರಟಾಗ ಏನನ್ನೋ ಕಳೆದುಕೊಂಡ ಅನುಭವ. ಇದೆ ಅನುಭವದೊಂದಿಗೆ ಹೊನಗೋಡಿನ ಹೂಬನ ಸದಾ ಹಸಿರಾಗಿರಲೆಂದು ಆಶಿಸಿ ಹೊರಟಾಗ ಸೂರ್ಯ ಮುಳುಗುವುದರಲ್ಲಿದ್ದ.

* * *
ಲೇಖಕಿ : ಎಸ್. ರೋ”ಣಿ ಶರ್ಮಾ
ಜರ್ನಲಿಸ್ಟ್
ಹೂ”ನಕುಳಿ ಎಂಟರ್ ಪ್ರೈಸಸ್
ಸಾಗರ.
ಮೊಬೈಲು : ೯೪೮೦೪೭೩೫೬೮

honagodu-garden-of-mruthyunjaya-rao-anasuya-rao-2

honagodu-garden-of-mruthyunjaya-rao-anasuya-rao-5

honagodu-garden-of-mruthyunjaya-rao-anasuya-rao-6

honagodu-garden-of-mruthyunjaya-rao-anasuya-rao-8

honagodu-garden-of-mruthyunjaya-rao-anasuya-rao-3

honagodu-garden-of-mruthyunjaya-rao-anasuya-rao-12

honagodu-garden-of-mruthyunjaya-rao-anasuya-rao-14

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.