ಶಿವಮೊಗ್ಗ : ವೈದ್ಯಕೀಯ ಕ್ಷೇತ್ರದಲ್ಲಿ ಅದೆಷ್ಟೇ ಸಂಶೋಧನೆಗಳು ನಡೆಯುತ್ತಿದ್ದರೂ ಕೂಡ ಮಾರಣಾಂತಿಕ ರೋಗಭೀತಿಯಲ್ಲಿರುವ ಜಗತ್ತಿನ ಜನರಿಗೆ ಇಂದು ತಮ್ಮ ಜೀವ ಹಾಗೂ ಜೀವ ವಿಮೆಯ ಮಹತ್ವದ ಅರಿವಾಗುತ್ತಿದೆ ಎಂದು ಯುವ ಸಂಗೀತ ನಿರ್ದೇಶಕ ಡಾ.ಚಿನ್ಮಯ ರಾವ್ ಹೇಳಿದರು.
ನಗರದಲ್ಲಿ ಕಳೆದ ಭಾನುವಾರ ನಡೆದ ಕೊಟೆಕ್ ಜೀವ ವಿಮಾ ಸಂಸ್ಥೆಯ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಭಾರತಲ್ಲಿ ಪ್ರಸ್ತುತ ಇರುವ ಎಲ್ಲಾ ಜೀವ ವಿಮಾ ಕಂಪೆನಿಗಳೂ ಕೇಂದ್ರ ಸರ್ಕಾರದ ಐಆರ್ಡಿಎಐ (ಇನ್ಸುರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಆತಾರಿಟಿ ಆಫ್ ಇಂಡಿಯಾ) ಅಧೀನದಲ್ಲಿ ಒಳಪಟ್ಟು ಕಾರ್ಯನಿರ್ವಹಿಸುತ್ತಿರುವ ಕಾರಣ ವಿಮೆ ಮಾಡಿಸುವ ಗ್ರಾಹಕ ವೈವಿಧ್ಯತೆಯಿಂದ ಕೂಡಿರುವ ಹತ್ತಾರು ಸಂಸ್ಥೆಗಳ ಯಾವುದೇ ವಿಮಾ ಯೋಜನೆಯನ್ನೂ ನಿರಾತಂಕವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಹಳ ವೇಗವಾಗಿ ಮುಂಚೂಣಿಗೆ ಬರುತ್ತಿರುವ ಕೊಟೆಕ್ ಜೀವ ವಿಮಾ ಸಂಸ್ಥೆ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗಿವಂತಾಗಲಿ ಎಂದು ಹೇಳಿದರು. ಇಂತಹ ಸಂಸ್ಥೆಗಳು ಬೆಳೆಯುತ್ತಿರುವ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಶಿವಮೊಗ್ಗ ಜಿಲ್ಲೆಯ ಮುಖ್ಯಸ್ಥರಾದ ಭೀಮಾ ನಾಯಕ್ ಭಾರತದಲ್ಲಿ ಜೀವ ವಿಮಾ ಸಂಸ್ಥೆಗಳು ಬೆಳೆದು ಬಂದ ದಾರಿಯನ್ನು ವಿವರಿಸುತ್ತಾ ಕೋವಿಡ್ ಪೂರ್ವ ಹಾಗೂ ಕೋವಿಡ್ ಸಂದರ್ಭದ ಜನಸಮಾನ್ಯರ ಆರ್ಥಿಕ ಪರಿಸ್ಥಿತಿ ಹಾಗೂ ಹೂಡಿಕೆಯ ಪ್ರಮಾಣಗಳು ಯಾವ ಯಾವ ಕ್ಷೇತ್ರದಲ್ಲಿ ಹೇಗೆ ವಿಭಿನ್ನವಾಗಿದೆ ಎಂಬುದನ್ನು ಸಭಿಕರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಶ್ರೀಧರ ಚಕ್ರವರ್ತಿ, ನಿತೀಶ್ ಎನ್, ಪವನ್ ಸಾಗರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅನುಶಾ ಅಂಟೋನಿ ಮತ್ತು ಸೌಮ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.