ಶ್ರೀಧರ ಸ್ಮರಣೆ

ಭಕ್ತಕೋಟಿ ಈ ಮೂಲಕ ಸದಾ ಉತ್ಸವವನ್ನಾಚರಿಸಲಿ..

ಭಗವಾನ್ ಸದ್ಗುರು ಶ್ರೀಧರರ ಶುಭಾಶೀರ್ವಾದ ಸದಾ ನಮ್ಮನಿಮ್ಮೆಲ್ಲರ ಮೇಲಿರಲಿ

ಭಗವಾನ್ ಸದ್ಗುಗು ಶ್ರೀಧರರು ಖಂಡಿತಾ ಮುಕ್ತರಾಗಿಲ್ಲ. ಮುಕ್ತರಾಗಿದ್ದರೂ ಅದು ದೈಹಿಕವಾಗಿ ಮಾತ್ರ. ಶ್ರೀಧರರು ದೇಹಭಾವವನ್ನೂ ಮೀರಿದ ನಿರಾಕಾರ ಪರಮಾತ್ಮ ಸ್ವರೂಪ, ಚೈತನ್ಯರೂಪಿ ಮಹಾನ್ ಚೇತನ, ಮಹಾನ್ ಸಂತ. ಸಂತನನ್ನೂ ಮೀರಿದ ಸಾಕ್ಷಾತ್ ಭಗವಾನ್. ಇಂತಹ ದೇವರನ್ನು ಇಂದಿಗೂ ಮನದಲ್ಲೇ ನೋಡುವ, ಆರಾಧಿಸುವ ಅವರ ಹಿಂದಿನ ಮಹಿಮೆಗಳನ್ನು ಮೆಲುಕು ಹಾಕುವ ಅಥವ ಮುಂದಿನ ಮಹಿಮೆಗಳನ್ನು ಎದುರು ನೋಡುವ ನಮ್ಮ ಜನ್ಮಕ್ಕೆ ಇದಕ್ಕಿಂತ ಇನ್ನೇನು ಸೌಭಾಗ್ಯ ಬೇಕು?! ಮಹಾಮಹಿಮರ ಮಹಿಮೆಗಳನ್ನು ಕೇಳಿ ತಿಳಿಯುವಲ್ಲಿ ಪರರಿಗೆ ಅದನ್ನು ಹೇಳಿ ತಿಳಿಸುವಲ್ಲಿ ಆನಂದಭಾವವನ್ನು ಅನುಭವಿಸುವುದೆಂದರೆ ಶ್ರೀಧರರ ಭಕ್ತಕೋಟಿಗೆ ಎಲ್ಲಿಲ್ಲದ ಉತ್ಸಾಹ. ಇಂತಹ ಉತ್ಸಾಹವನ್ನು ಪುಸ್ತಕಮಾಲಿಕೆಗಳ ಮೂಲಕ ನಿರಂತರ ಉತ್ಸವವನ್ನಾಗಿಸಬೇಕೆಂಬುದೇ ನಮ್ಮ ಕನ್ನಡ ಟೈಮ್ಸ್ ಸಂಸ್ಥೆಯ ಮಹದಾಶಯ.

ಈ ದಿಶೆಯಲ್ಲಿ ಇಂತಹ ಒಂದು ಅತ್ಯಪೂರ್ವ ಪರಿಕಲ್ಪನೆಗೆ ಮೂರ್ತರೂಪ ಕೊಟ್ಟು ಇದಕ್ಕೆ ಚಾಲನೆ ನೀಡುತ್ತಿರುವ ಹಿರಿಮೆಗರಿಮೆಗಳು ಸಲ್ಲಬೇಕಾದ್ದು ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಜಿ.ಟಿ ಶ್ರೀಧರ ಶರ್ಮ ಅವರಿಗೆ. ಶ್ರೀಧರ ಎಂಬ ಹೆಸರಿಟ್ಟ ತಮ್ಮ ಹೆತ್ತವರ ಭಾವಕ್ಕೆ ಅವರು ತಂಪನ್ನೆರೆದರೆ ಇತ್ತ ಭಗವಾನ್ ಶ್ರೀಧರರ ಭಕ್ತಕೋಟಿಗೆ ಶ್ರೀಧರರ ಅಗಣಿತ ಮಹಿಮೆಗಳ ಭರಪೂರ ಉಡುಗೊರೆಯನ್ನೇ ಅಕ್ಷರರೂಪದಲ್ಲಿ ಇನ್ನು ಮುಂದೆ ಸದಾ ನೀಡಲಿದ್ದಾರೆ.

ಪ್ರಿಯ ಓದುಗರೇ…ನಮ್ಮ “ಕನ್ನಡ ಟೈಮ್ಸ್” ಸಂಸ್ಥೆಯ ಅಧ್ಯಕ್ಷರಾದ ಸಮಾಜಸೇವಕ, ಶ್ರೀ ಶ್ರೀಧರಸ್ವಾಮಿಗಳ ಪರಮ ಭಕ್ತ ಜಿ.ಟಿ ಶ್ರೀಧರ ಶರ್ಮ ಅವರು ಅತ್ಯಂತ ಶ್ರದ್ಧೆ ಹಾಗು ಬದ್ಧತೆಯಿಂದ ಒಂದು ವ್ರತದಂತೆ ಶ್ರೀ ಶ್ರೀಧರಸ್ವಾಮಿಗಳ ಹಲವಾರು ಪ್ರಮುಖ ಘಟನಾವಳಿಗಳನ್ನು ಹಿಂದಿನ ಭಕ್ತರನೇಕರನ್ನು ಸಂಪರ್ಕಿಸಿ ಕಲೆ ಹಾಕಿದ್ದಾರೆ. ಅದರ ಫಲಿತಾಂಶವಾಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ “ಶ್ರೀಧರ ಸ್ಮರಣೆ-ಭಾಗ-೧” ಎಂಬ ಅತ್ಯಪರೂಪದ ಅಪೂರ್ವವಾದ ಈ ಪುಸ್ತಕ ನಮ್ಮ ಕನ್ನಡ ಟೈಮ್ಸ್ ಸಂಸ್ಥೆಯ ಪ್ರಕಾಶನ ವಿಭಾಗದ ಮೊದಲ ಪುಸ್ತಕವಾಗಿ ನಿಮ್ಮ ಕೈಲಿದೆ.
ಭಕ್ತಕೋಟಿ ಈ ಮೂಲಕ ಸದಾ ಉತ್ಸವವನ್ನಾಚರಿಸಲಿ…ಭಗವಾನ್ ಸದ್ಗುರು ಶ್ರೀಧರರ ಶುಭಾಶೀರ್ವಾದ ಸದಾ ನಮ್ಮನಿಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತಾ…

ಪ್ರೀತಿಯಿಂದ
ಚಿನ್ಮಯ ಎಂ.ರಾವ್
ಸಂಸ್ಥಾಪಕರು
ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ (ರಿ.)

ಹೊನಗೋಡು, ಹೊಸೂರು ಅಂಚೆ
ಸಾಗರ (ತಾ) ಶಿವಮೊಗ್ಗ (ಜಿ)-577412
E-mail : [email protected]
WhatsApp : 9449911590
For Calls : 9535585270

Written on 6-10-2014

Dr.Chinmaya Rao

Dr.Chinmaya M.Rao who is the Founder, Editor and Publisher of KANNADA TIMES, who is from Honagodu, Sagar taluk, Shimoga district, is a significant figure in the world of music. Though born in a family of agriculturists, Rao showed love for music and literature throughout his childhood. For more details visit : https://www.facebook.com/chinmaya.m.rao
Back to top button

Adblock Detected

Please consider supporting us by disabling your ad blocker