ಹೊಸ ಪರಿಚಯ

ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ಅನುಷಾ ರೈ

ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ಅನುಷಾ ರೈ ಮೂರನೇ ಚಿತ್ರವನ್ನ ಆರಂಭಿಸಿದ್ದಾರೆ. ಅದ್ಧೂರಿಯಾಗಿ ಸೆಟ್ಟೇರಿದ್ದ ‘ಕರ್ಷಣಂ’ ಚಿತ್ರದಲ್ಲಿ ಅನುಷಾ ಪತ್ರಕರ್ತೆ ಪಾತ್ರವನ್ನ ನಿಭಾಯಿಸಲಿದ್ದಾರೆ.
‘ಚಂದ್ರಲೇಖಾ’ ಧಾರಾವಾಹಿ ಖ್ಯಾತಿಯ ಧನಂಜಯ್ ಅತ್ರೆ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ‘ಕರ್ಷಣಂ’ ಚಿತ್ರ ಇದಾಗಿದ್ದು, ಕ್ರೈಂ ಜರ್ನಲಿಸ್ಟ್ ಆಗಿ ಅನುಷಾ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಮೂಡಿಬಂದಿದ್ದ ‘ಮಹಾಭಾರತ’ ಎಂಬ ಜನಪ್ರಿಯ ಧಾರಾವಾಹಿಯನ್ನು ನಿರ್ದೇಶಿಸಿದ್ದ ಶರವಣ ಈ ಸಿನಿಮಾಕ್ಕೆ ಆಕ್ಷನ್ ಕಟ್​ ಹೇಳುತ್ತಿದ್ದಾರೆ.
ಈ ಮುದ್ದು ಮುಖದ ಹುಡುಗಿ ಹುಟ್ಟಿ ಬೆಳೆದದ್ದು ತುಮಕೂರಿನಲ್ಲಿ. ತಂದೆ ಹನುಮಂತ್ ರಾಜ್, ತಾಯಿ ಭಾಗ್ಯ. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ಅನುಷಾ, ಬೆಂಗಳೂರಿನ ಆಚಾರ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದಾರೆ. ಎಂಟೆಕ್ ಮಾಡಿ ಇಂಜಿನಿಯರ್ ಆಗಬೇಕು ಎಂದುಕೊಂಡಿದ್ದ ಅನುಷಾ ಆಗಿದ್ದು ನಟಿ.
ನಟನೆಯ ಜೊತೆ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಅನುಷಾ ಈ ಮೊದಲು ಹಂಸಲೇಖ ಮ್ಯೂಸಿಕ್‌ ಸ್ಕೂಲ್‌ ನಲ್ಲಿ ಸಂಗೀತ ಕಲಿತ್ತಿದ್ದಾರಂತೆ. ಅಲ್ಲಿದಾಗಲೇ ಮೊದಲ ಸಿನಿಮಾ ಮಾಡುವ ಅವಕಾಶ ಬಂದಿದೆ. ನಂತರ ಬೆಳ್ಳಿತೆರೆಗೆ ಕಾಲಿಟ್ಟಿ ಅನುಷಾ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಅನುಷಾ ರೈ ಅಭಿನಯದ ಎರಡು ಸಿನಿಮಾಗಳು ಈಗಾಗಲೇ ತೆರೆಕಂಡಿದೆ. ‘ಮಹಾನುಭಾವರು’ ಮತ್ತು ‘ಬಿಎಂಡಬ್ಲ್ಯೂ’ ಚಿತ್ರಗಳಲ್ಲಿ ಅನುಷಾ ನಾಯಕಿಯಾಗಿ ಅಭಿನಯಿಸಿದ್ದರು. ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಸಿನಿಮಾ ಮಾತ್ರವಲ್ಲ ‘ಸರಯೂ’, ‘ರಾಧಾರಮಣ’, ‘ಅಣ್ಣಯ್ಯ’, ಧಾರಾವಾಹಿಗಳಲ್ಲಿ ಹಾಗೂ ‘ಪ್ರಾರ್ಥನಾ’ ಎಂಬ ಟೆಲಿ ಫಿಲ್ಮ್ ನಲ್ಲಿ ಅನುಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ನಾಗಕನ್ನಿಕೆ ಧಾರಾವಾಹಿಯಲ್ಲಿ ಅನುಷಾ ರೈ ನಟಿಸುತ್ತಿದ್ದಾರೆ.
ಧನಂಜಯ್ ಅತ್ರೆ ಅವರು ಸ್ವತಃ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಜಯ್ ಚೆಂಡೂರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಚಿತ್ರ. ಈ ಚಿತ್ರಕ್ಕೆ ಮೋಹನ್ ಎಂ ಮುಗುಡೇಶ್ವರ್ ಅವರ ಛಾಯಾಗ್ರಹಣ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಎಸ್. ಎಸ್ ಅರ್ಜುನ್ ಅವರ ಸಹ ನಿರ್ದೇಶನ, ವಸಂತ ರಾವ್ ಎಂ ಕುಲಕರ್ಣಿ ಅವರ ಕಲಾ ನಿರ್ದೇಶನ, ಅಶೋಕ್, ಸತೀಶ್ ಬ್ರಹ್ಮಾವರ್ ಸಾಹಸವಿದೆ.
Tags

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker
Skip to toolbar