ಅಮ್ಮಾಜಿಯಾಗಿ ಬಂದ ಅಂಬಿಕಾ… “ಪ್ರೀತಿಯಿಂದ”…ಮಾತಾಡಿದಾಗ…

ಸಂದರ್ಶನ-ಚಿನ್ಮಯ.ಎಂ.ರಾವ್ ಹೊನಗೋಡು.

30-8-2011

ಹೌದು..ಕನ್ನಡ ಕಿರುತೆರೆಗೆ ಇದೊಂದು ಸಂತಸದ ಸಂಗತಿ. ಹಕ್ಕಿಯೊಂದು ಮರಳಿ ಗೂಡಿಗೆ ಬಂದಂತಾಗಿದೆ. ಎಂಬತ್ತರ ದಶಕದ ಹಾಟ್ ಬೆಡಗಿ ಅಂಬಿಕಾಳನ್ನು ಮನೆಯಿಂದ ಕರೆತಂದು ಕಿರುತೆರೆಯ ಮುಂದೆ ನಿಲ್ಲಿಸಿದ್ದಾರೆ ನಿರ್ಮಾಪಕಿ ರೇಖಾರಾಣಿ. ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಇನ್ನು ನಿರ್ದೇಶಕ ಅಶೋಕ್ ಕಶ್ಯಪ್ ಪಕ್ಕ “ಸೂಪರ್” ಶೈಲಿಯಲ್ಲಿ ಅಂಬಿಕಾ ರಿ ಎಂಟ್ರಿಯನ್ನು ಚಿತ್ರಿಸಿ ಬೆರಗಾಗಿಸಿದ್ದಾರೆ. ಸುಮಾರು ೫೦ ಸಂಚಿಕೆಯ ನಂತರ ಅಂಬಿಕಾ ಪ್ರವೇಶ, ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪ್ರೀತಿಯಿಂದ” ಧಾರವಾಹಿಗೆ ಕಳಶವಿಟ್ಟಂತಾಗಿದೆ!
ಮಲೆನಾಡಿನ ಮಡಿಲು ತೀರ್ಥಹಳ್ಳಿ ಸನಿಹದ ಕೋಟೆಗದ್ದೆಯಲ್ಲಿ “ಪ್ರೀತಿಯಿಂದ” ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಟೈಮ್ಸ್ ಪತ್ರಿಕೆಗೆಂದು ಈ ಲೇಖಕ ಸಂದರ್ಶನ ಮಾಡಿದಾಗ ..ಸೆಟ್‌ನಲ್ಲಿ ಒಂದಿನಿತೂ ಅಪ್‌ಸೆಟ್ ಆಗದೆ ಮೊನಚಾದ ಪ್ರೆಶ್ನೆಗಳಿಗೂ ಮನಬಿಚ್ಚಿ ಮಾತಾಡಿದಳು ಕಳೆದುಹೋಗಿದ್ದ ಅದೇ “ಚಳಿ ಚಳಿ” ಹಾಡಿನ ಅಂಬಿಕಾ…

೧- ಕನ್ನಡ ಕಿರುತೆರೆಯ ಮೂಲಕ ಮರುಪ್ರವೇಶ …ಹೇಗನ್ನಿಸ್ತಾ ಇದೆ?

ನಾನು ಎಷ್ಟೋ ಕ್ಯಾರೆಕ್ಟರ್ ಮಾಡಿದೀನಿ. ಸಿನಿಮಾ,ಸೀರಿಯಲ್ ಹೀಗೆ…ಅದರಲ್ಲಿ ಇದು “ಐ ಥಿಂಕ್ ದಿ ಬೆಸ್ಟ್” ಈ ಅಮ್ಮಾಜಿಯ ಪಾತ್ರ. ಕನ್ನಡದಲ್ಲಿ ಒಂದು ಗಂಭೀರ ಪಾತ್ರ ಮಾಡಬೇಕು ಅಂತ ತುಂಬಾ ವರ್ಷದಿಂದ ಆಸೆಯಿತ್ತು. ಸೊ ಈಗ ಆ ಆಸೆ ಈಡೇರಿದೆ. ತಮಿಳಿನಲ್ಲಿ “ಪೌರ್ಣಮಿ ಅಲೆಗಳ್” ಸಿನಿಮಾದಲ್ಲಿ ಈ ರೀತಿ ಫೋರ್ಸ್ ಫುಲ್ ಕ್ಯಾರೆಕ್ಟರ್ ಮಾಡಿದ್ದೆ. ಬಟ್ ಅದು ಸ್ವಲ್ಪ ನೆಗೆಟೀವ್ ಶೇಡ್ ಇತ್ತು. “ಇಂದಿನ ಭಾರತ”, “ನ್ಯಾಯಕ್ಕೆ ಶಿಕ್ಷೆ” ಚಿತ್ರಗಳಲ್ಲಿ ಈ ರೀತಿ ಮಾಡಿದ್ದೆ. ಬಟ್ ಯ್ಯಾಮ್ ಲವಿಂಗ್ ದಿಸ್ ಅಮ್ಮಾಜಿ ಕ್ಯಾರೆಕ್ಟರ್. ಅಮ್ಮಾಜಿಯ ನಿಜವಾದ ಹೆಸರು ಶಮಂತಕಮಣಿ ಸಾಹುಕಾರ್. ಇದೊಂದು ವಿಭಿನ್ನ ಪಾತ್ರ. ಗರ್ವ ತುಂಬಿದ ಹೆಣ್ಣಿನ ಪಾತ್ರ.

೨-ನಿಮ್ಮ ಸಹಜಸ್ವಭಾವಕ್ಕೂ ಈ ಪಾತ್ರಕ್ಕೂ ಹೋಲಿಕೆ ಇದೆಯಾ..?!

ನಂಗೆ ಕೊಬ್ಬಿದೆಯಾ ಅಂತ ಬೇರೆ ರೀತಿಯಲ್ಲಿ ಕೇಳ್ತಾ ಇದೀರಾ..?! ಅಷ್ಟು ಕೊಬ್ಬಿರೊ ಕ್ಯಾರೆಕ್ಟ್ರಾ ಅಂತ ಕೇಳ್ತಾ ಇದ್ದೀರಾ..? (ಹುಸಿಮುನಿಸು ಮಾಡಿಕೊಂಡು ನಗುತ್ತಾ)…ಇರಲಿ ಬಿಡಿ…ಇದ್ರೆ ಏನು?….ಅದೂ ಇರಬೇಕಲ್ವಾ ಸ್ವಲ್ಪ….ಪೂರ್ತಿ ಆ ಸ್ವಭಾವ ಏನು ಇಲ್ಲ….ಸ್ವಲ್ಪ ಇರಬಹುದು.

೩-ಇನ್ನೂ ಈ ಸೌಂದರ್ಯದ ಗುಟ್ಟೇನು?

(ನಾಚಿ ನೀರಾಗಿ ನಗುತ್ತಾ…) ಸೌಂದರ್ಯನೂ ಇಲ್ಲ…ಗುಟ್ಟೂ ಇಲ್ಲ….ಸೌಂದರ್ಯದ ಗುಟ್ಟೇನು ಅಂತ ನಮ್ಹತ್ರ ಒಬ್ರು ಕೇಳ್ತಾ ಇರೋದಕ್ಕೆ ಸಂತೋಷ ಆಗ್ತಾ ಇದೆ. ಇದೇ ಅಂದ ಹೋಗೋವರೆಗೂ ಇರಬೇಕು ಅಂತ ಆಸೆ.

೪-ವ್ಯಕ್ತಿಯ ಬಾಹ್ಯಸೌಂದರ್ಯ ಅಂತರಂಗಸೌಂದರ್ಯದಿಂದ ಬರಬಹುದಾ?

ಆ ರೀತಿ ಏನು ಇಲ್ಲ. ಈಗ ಈ ಧಾರವಾಹಿಯ ಪಾತ್ರದಲ್ಲಿ ಅಮ್ಮಾಜಿ ನೋಡೋದಕ್ಕೆ ಚೆನ್ನಾಗಿ ತಾನೆ ಇರೋದು? ಬಟ್ ಆ ಕ್ಯಾರೆಕ್ಟರ್ ಎಷ್ಟು ರೂಡ್ ಆಗಿದೆ. ಸೊ.. ಅದಕ್ಕು ಇದಕ್ಕೂ ಸಂಬಂಧಾನೇ ಇಲ್ಲ.

೫-ಕ್ಯಾರೆಕ್ಟರ್ ಅಂತ ಅಲ್ಲ…ನಿಜ ಜೀವನದಲ್ಲಿ…..

ಕೆಲವು ವಿಷಯಗಳಲ್ಲಿ ಪೀಪಲ್ ನಾವು ನೋಡಿದಾಗ ವೆರಿ ಬ್ಯುಟಿಫುಲ್, ವೆರಿ ಹ್ಯಾಂಡ್‌ಸಮ್ ಅಂತೀವಿ. ಪಕ್ಕದಲ್ಲಿ ಹೋದಾಗ ಮಾತಾಡಿದ ಮೇಲೇ ಗೊತ್ತಾಗೊದು ಅವರು ಎಷ್ಟು ರೂಡ್,ಕನ್ನಿಂಗ್ ಅಂತ. ಆದ್ರೆ ಕೆಲವ್ರು ನೋಡೋಕೆ ರೂಡ್ ಆಗಿರ್ತಾರೆ. ಬಟ್ ಹೇಳ್ತೀರಲ್ಲ ಕನ್ನಡದಲ್ಲಿ “ಚಿನ್ನದಂತ ಮನಸ್ಸು” ಅಂತ. ಆಫ್ಟ್ರ್ ವಿ ಮಿಂಗಲ್ ವಿತ್ ದೆಮ್ ನಮಗೆ ಅದು ಗೊತ್ತಾಗತ್ತೆ.

೬-ಹಾಗಾದ್ರೆ ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್ ಅಂತಾರಲ್ಲ….

ಇಲ್ಲ ಐ ಡೋಂಟ್ ಅಗ್ರಿ ವಿಥ್ ದಟ್…ಅದು ಕೆಲವು ಕೇಸ್‌ನಲ್ಲಿ ಮಾತ್ರ. ಎಕ್ಸಾಂಪಲ್ ಕೊಡಬಹುದು…ಅದು ಗಾಸಿಪ್ ಆಗತ್ತೆ. ಅದಕ್ಕೆ ನಾನು ಕೊಡೋದಿಲ್ಲ.

೭-ರಂಗಭೂಮಿಯ ಅನುಭವ….?

ಚಿಕ್ಕ ವಯಸ್ಸಿನಲ್ಲಿ ನೃತ್ಯರೂಪಕ ಮಾಡುತ್ತಿದ್ವಿ ನಾನು ನನ್ನ ತಂಗಿ ರಾಧಾ. ನಾವಿಬ್ರೂ ಭರತನಾಟ್ಯ ಕಲಿತಾ ಇದ್ವಿ. ಕ್ರೀಡೆಯಲ್ಲಿ ರಾಧಾ ಆಸಕ್ತಿ. ನಾನು ಪೊಯೆಮ್ಸ್ ಬರಿತಾ ಇದ್ದೆ. ಮಿಮಿಕ್ರಿ,ಕಥೆ,ಪದ್ಯಪಾರಾಯಣ,ಏಕಪಾತ್ರಾಭಿನಯ ಎಲ್ಲಾ ನಾನು…ಸ್ಪೋರ್ಟ್ಸ್ ಎಲ್ಲಾ ಅವಳು.

೮-ಯಾರ ನಟನೆ ನಿಮಗೆ ಸ್ಪೂರ್ತಿ?

ಎಲ್ಲಾ ಭಾಷೆಗಳಲ್ಲೂ ಒಳ್ಳೊಳ್ಳೆ ಕಲಾವಿದರಿದ್ದಾರೆ. ಹಿಂದಿನ ನರ್ಗೀಸ್,ಮೀನಾ ಕುಮಾರಿ,ಕಲ್ಪನಾ,ಆರತಿ ಇಂದಿನ ರಮ್ಯ ,ರಕ್ಷಿತ ಎಲ್ಲರದ್ದೂ ಒಂದೊಂದು ಸ್ಟೈಲ್ ಇರತ್ತೆ. ಎಲ್ಲರಿಂದನೂ ಕಲಿಯೋದು ತುಂಬಾ ಇದೆ. ಬಟ್ ಯಾರನ್ನಾದ್ರೂ ಇಮಿಟೇಟ್ ಮಾಡ್ತೀರಾ ಅಂತ ಕೇಳಿದ್ರೆ ಇಲ್ಲ.

೯-ನಿಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರುವ ಅಭಿಲಾಷೆ ಏನಾದ್ರೂ ಇದೆಯಾ?

If they want to come they are welcome to come, they can try any language.

ಅವರು ಹುಟ್ಟಿ ಬೆಳೆದದ್ದೆಲ್ಲಾ ಅಮೇರಿಕಾದಲ್ಲಿ. ಇಂಗ್ಲೀಷ್ ಮಾತಾಡ್ತಾರೆ. ಇಬ್ರೂ ಜರ್ಮನ್,ಮಲಾಯಾಳಮ್ ಕೂಡ ಮಾತಾಡ್ತಾರೆ. ಭಾಷೆಗಳನ್ನು ಕಲಿಯೊ ಆಸಕ್ತಿ ಅವರಲ್ಲೂ ಇದೆ. ಅವ್ರು ಫಸ್ಟ್ ನೋಡಿದ ಕನ್ನಡ ಮೂವಿ “ಅಪ್ಪು”. ವು ಈಸ್ ದಟ್ ಗಾಯ್? ಅಂತ ಕೇಳಿದ್ರು. ನಾನು “ಚಲಿಸುವ ಮೋಡಗಳು” ಸಿನಿಮಾ ತೋರಿಸಿ “ದಿಸ್ ಈಸ್ ದಟ್ ಕಿಡ್” ಅಂದೆ.

೧೦-ನಿಮಗೆ ಫ್ಯಾಮಿಲಿ ಸಪೋರ್ಟ್ ಹೇಗಿದೆ?

ಇದೆ….ನಮ್ಮ ಮನೇಲಿ ಇದೆ. ಅಪ್ಪ ಅಮ್ಮ ಎನ್ಕರೇಜ್ ಮಾಡಿದ್ರು. ನಾನು ಸಿನಿಮಾದಲ್ಲಿ ಬಂದೆ. ಮಲ್ಲಿಕ ಬಂದಿಲ್ಲ. ರಾಧಾ ಈ ಲ್ಯಾಂಡ್‌ಗೆ ಬಂದ್ಲು. ಅರ್ಜುನ್ ನನ್ನ ತಮ್ಮ…ಬಾಲ್‌ರಾಜ್ ಪರಿಚಯಿಸಿದ್ರು. ಅವ್ನೂ ಬಂದ. ಈಗಲೂ ಇವತ್ತಿನವರೆಗೂ ತುಂಬಾ ಸಹಕಾರ ಇದೆ.

೧೧-ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿಯೊ, ನಿರ್ದೇಶಕಿಯಾಗಿಯೊ ಅಥವ ಬೇರೆ ಇನ್ನಾವುದೊ ರೀತಿಯಲ್ಲಿ ಕೊಡುಗೆ ಕೊಡಬೇಕೆಂಬ ಕನಸು ಇದೆಯಾ?

ಇಲ್ಲ….ನೊ ನೊ ನೊ ನೊ ನೊ….ನೋ …ಪಾಪರೀ..ಪ್ರೇಕ್ಷಕರು…ಅಂಬಿಕಾ ಹೀಗೇ ಇದ್ರೆ ಚೆನ್ನ ಅಂತ ಸ್ವೀಕರಿಸಿದಾರೆ. ಹೀಗೇ ಇರ್ತೀನಿ. ಆದ್ರೆ ತಮಿಳಿನಲ್ಲಿ “ಅನಬೆಲ್ಲ” ಅನ್ನೊ ಚಿತ್ರ ನಾನೇ ನಿರ್ದೇಶನ ಮಾಡಿದೀನಿ. ನಿರ್ದೇಶನ ತುಂಬಾ ಕಷ್ಟದ ಕೆಲಸ.

೧೨-ಇಂದಿನ ಕನ್ನಡ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ?

ಕಾಲಕ್ಕೆ ತಕ್ಕಂತೆ ಕುಣಿಬೇಕು. ಅಪ್‌ಡೇಟ್ ಆಗಿದೆ. ಸಂತೋಷ. ಅಭಿನಯ ಅನ್ನೋದು ಒಂದೇ…ಎಷ್ಟೇ ಶತಮಾನಗಳು ಕಳೆದ್ರೂ…

೧೩-ಚತುರ್ಭಾಷಾ ತಾರೆ ನೀವು….ನಿಮಗೆ ಯಾವ ಭಾಷೆ ಇಷ್ಟ?

ಮಾತಾಡುವ …ಕಲಿಯುವ….ಎಲ್ಲಾ ಭಾಷೆ ನನ್ಗೆ ಇಷ್ಟ.

೧೪-ಕನ್ನಡದಲ್ಲಿ ಮುಂದೆ ನಟಿಸಬೇಕು ಅಂತ ಇದೆಯಾ?

ಖಂಡಿತಾ…ಒಳ್ಳೊಳ್ಳೆ ಪಾತ್ರ ಸಿಕ್ಕಿದ್ರೆ ಖಂಡಿತಾ ಮಾಡ್ತಿನಿ.

೧೫-ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ….

ಎಲ್ಲಾ ಫೀಲ್ಡ್‌ನಲ್ಲೂ ಒಳ್ಳೆಯದು,ಕೆಟ್ಟದ್ದು ಎರಡೂ ಇದ್ದೇ ಇದೆ. ಅದೇ ರೀತಿ ನಮ್ಮ ಚಿತ್ರರಂಗದಲ್ಲಿ ಕೂಡ. ಆದ್ರೆ
ಚಿತ್ರರಂಗದ ಬಗ್ಗೆ ಚಿತ್ರರಂಗದವರೇ ಅಸಹ್ಯವಾಗಿ ಮಾತನಾಡುವುದಕ್ಕೆ ಕೆಲವೊಮ್ಮೆ ಬೇಸರವಾಗುತ್ತೆ. ಅಂತವರು ಇಲ್ಲೇ ಏಕೆ ಬೀಡು ಬಿಟ್ಟು ಬೇಡವಾದ್ದನ್ನು ಹರಡಬೇಕು? ಚಿತ್ರರಂಗ ಅವರ ಪಾಲಿಗೆ ಸರಿಯಿಲ್ಲ ಎಂದಾದರೆ ಬಿಟ್ಟುಬಿಡಬಹುದಲ್ಲ .ಚಿತ್ರರಂಗದ ಬಗ್ಗೆ ಗೌರವ ಇರುವವರು ಮಾತ್ರ ಇಲ್ಲಿದ್ದರೆ ಸಾಕು.

ಸಂದರ್ಶನ-ಚಿನ್ಮಯ.ಎಂ.ರಾವ್ ಹೊನಗೋಡು.

30-8-2011
**************************

Exit mobile version