ಸ್ಯಾಂಡಲ್ ವುಡ್

“ಜಾಗ್ವಾರ್” ಹಲವು ವಿಶೇಷತೆಗಳ ಆಗರ..!!

h-d-kumaraswamyಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ೫೭ನೇ ಹುಟ್ಟುಹಬ್ಬದಂದೇ (ಡಿಸೆಂಬರ್ ೧೬) ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಮೊಟ್ಟ ಮೊದಲ ಜಾಗ್ವಾರ್’ ಚಿತ್ರದ ಅದ್ದೂರಿ ಮುಹೂರ್ತ ನೆರವೇರಿತು. ಬೆಂಗಳೂರಿನ ಕಂಠೀರವ ಒಳಾಂಗಣದಲ್ಲಿ ಆಯೋಜಿಸಿದ್ದ ವರ್ಣರಂಜಿತ ವೇದಿಕೆಯಲ್ಲಿ ಜಾಗ್ವಾರ್’ ಸಿನಿಮಾಗೆ ಚಾಲನೆ ನೀಡಲಾಗಿತ್ತು. ಹೇಳಿ ಕೇಳಿ ಜಾಗ್ವಾರ್’ ಎಚ್.ಡಿ.ಕುಮಾರಸ್ವಾಮಿ ಅವರ ಚೆನ್ನಾಂಬಿಕ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ. ಅದರಲ್ಲೂ ಪುತ್ರ ನಿಖಿಲ್ ಕುಮಾರ್ ಚೊಚ್ಚಲ ಚಿತ್ರ. ಅಂದ ಮೇಲೆ ಕೇಳಬೇಕೆ? ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳು ಇರಬೇಕಲ್ಲವೇ? ಹೌದು, “ಜಾಗ್ವಾರ್” ಹತ್ತು ಹಲವು ವಿಶೇಷತೆಗಳ ಆಗರ..!

ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗಿರುವ ಜಾಗ್ವಾರ್’ ಚಿತ್ರಕ್ಕೆ ಎಸ್.ಎಸ್.ರಾಜಮೌಳಿ ಶಿಷ್ಯ ಮಹಾದೇವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ದೊಡ್ಡ ಕಲಾವಿದರಾದ ಜಗಪತಿ ಬಾಬು, ರಮ್ಯಾಕೃಷ್ಣ ಕೂಡ ಮುಖ್ಯಭೂಮಿಕೆಯಲ್ಲಿ ಇರುವುದು ಜಾಗ್ವಾರ್’ ಚಿತ್ರದ ಮೇಲಿರುವ ನಿರೀಕ್ಷೆ ಡಬಲ್ ಆಗುವಂತೆ ಮಾಡಿದೆ. ಕಾಮಿಡಿ ಪಂಚ್ ನೀಡಲು ಸಾಧು ಕೋಕಿಲ ಇದ್ದಾರೆ.

jaguar-kannada-movie-3ಹಾಲಿವುಡ್ ನಲ್ಲಿ ಬಳಸುವ ನೂತನ ತಂತ್ರಜ್ಞಾನದ ವೆಪನ್’ ಕ್ಯಾಮರಾ

ಉತ್ತಮ ಗುಣಮಟ್ಟದ ಚಿತ್ರೀಕರಣಕ್ಕೆ ಶ್ರಮಿಸುತ್ತಿರುವ ಚಿತ್ರತಂಡ ಇತ್ತೀಚಿನ ತಂತ್ರಜ್ಞಾನದ, ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ಬಳಸುವ ವೆಪನ್’ ಕ್ಯಾಮರಾ ಬಳಸುತ್ತಿದೆಯಂತೆ. “ಇದೇ ಮೊದಲ ಬಾರಿಗೆ ಭಾರತೀಯ ಸಿನೆಮಾಗಳಲ್ಲಿ ವೆಪನ್ ಕ್ಯಾಮರಾ ಬಳಸುತ್ತಿರುವುದು. ಸಿನೆಮಾಟೋಗ್ರಾಫರ್ ಮನೋಜ್ ಪರಮಹಂಸ ಅವರ ವಿಶೇಷತೆ ಏನೆಂದರೆ, ಅವರು ಅಂತರಾಷ್ಟ್ರೀಯ ಛಾಯಾಗ್ರಹಕರ ಜೊತೆ ನಿರಂತರ ಸಂಪರ್ಕದಲ್ಲಿರುವುದಲ್ಲದೆ ತಮ್ಮ ತಿಳುವಳಿಕೆಯನ್ನು ವೃದ್ಧಿಸಿಕೊಳ್ಳುತ್ತಿರುತ್ತಾರೆ. ಇದಿನ್ನು ಬಾಲಿವುಡ್‌ಗೂ ಬಂದಿಲ್ಲ, ಏಕೆಂದರೆ ಇದನ್ನು ಮುಂಗಡವಾಗಿ ಕಾಯ್ದಿರಿಸಬೇಕು. ನನ್ನ ತಂದೆ ನನ್ನ ಹುಟ್ಟುಹಬ್ಬಕ್ಕೆ ಇದನ್ನು ತರಿಸಿದರು ಆದರೆ ವಿದೇಶಿ ತೆರಿಗೆ ನಿಯಮಗಳನ್ನು ದಾಟಿ ಬರಲು ಹೆಚ್ಚಿನ ಸಮಯ ಹಿಡಿಯಿತು. ಇದನ್ನು ಎರಡನೇ ಕ್ಯಾಮರಾವಾಗಿ ಬಳಸುತ್ತಿದ್ದೇವೆ. ಇದು ಸಣ್ಣದಾಗಿದ್ದರೂ, ತೆರೆಯ ಮೇಲೆ ಮಾಂತ್ರಿಕತೆ ಸೃಷ್ಟಿಸುತ್ತದೆ” ಎಂದು ವಿವರಿಸುತ್ತಾರೆ ನಿಖಿಲ್.

jaguar-kannada-movie-2ಟ್ರೈಲರ್ ನಲ್ಲಿದೆ ಲಿಪ್ ಲಾಕ್ ದೃಶ್ಯ !

ಜಾಗ್ವಾರ್’ ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಸಿನಿ ಅಂಗಳಕ್ಕೆ ಕಾಲಿಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸದ್ದಿಲ್ಲದೆ ಈ ಚಿತ್ರದ ದೃಶ್ಯವೊಂದರಲ್ಲಿ ಲಿಪ್ ಲಾಕ್ ಮಾಡಿದ್ದಾರಂತೆ ! ಚಿತ್ರದ ನಾಯಕಿ ಮಲೆಯಾಳಂ ಬೆಡಗಿ ದೀಪ್ತಿ ಸತಿ ಜೊತೆ ನಿಖಿಲ್ ಕುಮಾರ್ ಲಿಪ್ ಲಾಕ್ ಮಾಡಿರುವ ದೃಶ್ಯ ಟ್ರೈಲರ್‌ನಿಂದಾಗಿ ಈಗ ಎಲ್ಲೆಡೆ ಹರಿದಾಡುತ್ತಿದೆ ! ಚೊಚ್ಚಲ ಸಿನಿಮಾದಲ್ಲೇ ನಿಖಿಲ್ ಕುಮಾರ್ ಗೆ ಲಿಪ್ ಲಾಕ್ ಭಾಗ್ಯ ಸಿಕ್ಕಿದೆ ಅಂತ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರಂತೆ.

jaguar-kannada-movie-6ಯಾರು ಈ ಬೋಲ್ಡ್ ನಟಿ ದೀಪ್ತಿ?

ಕೇರಳದ ಕೊಚ್ಚಿ ಮೂಲದ ದೀಪ್ತಿ ಸತಿ ಬೆಳೆದದ್ದು ಮಾತ್ರ ಮುಂಬೈನಲ್ಲಿ. ೨೦೧೨ ರಲ್ಲಿ ಮಿಸ್ ಕೇರಳಾ’ ಕಿರೀಟ ಮುಡಿಗೇರಿಸಿಕೊಂಡವರು ಇದೇ ದೀಪ್ತಿ. ಮಾಡೆಲಿಂಗ್ ಕ್ಷೇತ್ರದ ಕೋಲ್ಮಿಂಚು ಆಗಿರುವ ದೀಪ್ತಿ ಸತಿ ಫೆಮಿನಾ ಮಿಸ್ ಇಂಡಿಯಾ ೨೦೧೪ರಲ್ಲೂ ಭಾಗವಹಿಸಿದ್ದರು. ಪ್ರತಿಭಾನ್ವಿತೆ ನಟಿ ದೀಪ್ತಿ ಸತಿ ಕಥಕ್ ಮತ್ತು ಭರತನಾಟ್ಯಂ ನೃತ್ಯ ಕಲಾವಿದೆ. ಕರ್ನಾಟಿಕ್ ಮತ್ತು ಹಿಂದುಸ್ತಾನಿ ಸಂಗೀತವನ್ನೂ ದೀಪ್ತಿ ಕಲಿಯುತ್ತಿದ್ದಾರೆ.

jaguar-kannada-movie-4ಜಾಗ್ವಾರ್’ ಈಕೆಗೆ ಎರಡನೇ ಚಿತ್ರ ಮಲೆಯಾಳಂನ ನೀ-ನಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ದೀಪ್ತಿ ಸತಿ ಇದೀಗ ಸ್ಯಾಂಡಲ್ ವುಡ್ ಗೆ ಜಾಗ್ವಾರ್’ ಮೂಲಕ ಕಾಲಿಟ್ಟಿದ್ದಾರೆ.ಎರಡನೇ ಚಿತ್ರದಲ್ಲಿ ಲಿಪ್ ಲಾಕ್ ತಮ್ಮ ಎರಡನೇ ಸಿನಿಮಾ ‘ಜಾಗ್ವಾರ್’ನಲ್ಲಿ ನಿಖಿಲ್ ಕುಮಾರ್ ರನ್ನ ಚುಂಬಿಸಿ ದೀಪ್ತಿ ಸತಿ ಸದ್ದು ಮಾಡಿದ್ದಾರೆ.

ಮಂಡ್ಯದಲ್ಲಿ ಇತ್ತೀಚೆಗಷ್ಟೇ ನಡೆದ ‘ಜಾಗ್ವಾರ್’ ಧ್ವನಿಸುರುಳಿ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿ ಆಗಿದ್ದರು. ಅನಿತಾ ಕುಮಾರಸ್ವಾಮಿ ನಿರ್ಮಿಸಿರುವ ಜಾಗ್ವಾರ್’ ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆಯೆಂಬ ಮಾಹಿತಿಯಿದೆ. ಅಲ್ಲಿಗೆ ಹಾಲಿವುಡ್ ಮಾದರಿಯ ಕನ್ನಡ ಚಿತ್ರದಿಂದ ಸ್ಯಾಂಡಲ್‌ವುಡ್ ಮತ್ತಷ್ಟು ಮೇಲೇರಲಿದೆಯಾ ಎಂದು ಕಾದುನೋಡಬೇಕಿದೆ. ಚಿತ್ರತಂಡಕ್ಕೆ ಶುಭವಾಗಲಿ.

Back to top button

Adblock Detected

Please consider supporting us by disabling your ad blocker